ಜೊಲ್ಲೆ ಶಿಕ್ಷಣ ಸಂಸ್ಥೆಯ

ಶಿವಶಂಕರ ಜೊಲ್ಲೆ ಕನ್ನಡ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಯಕ್ಸಂಬಾ

Principal Desk

  • Home
  • Principal Desk
ಶ್ರೀ ವಿರುಪಾಕ್ಷಿ ರು ಭಿವಸೆ

ಶ್ರೀ ವಿರುಪಾಕ್ಷಿ ರು ಭಿವಸೆ

ಮುಖ್ಯೋಪಾಧ್ಯಾಯರು

ನಲುಮೇಯ ವಿದ್ಯಾರ್ಥಿಗಳೇ,

ಜೀವನದಲ್ಲಿ ಗುರಿ ಮತ್ತು ಯಶಸನ್ನು ಹೊಂದಿ ನಾನು ಜೀವನದ ಹುಟ್ಟು ಸಾವಿನ ಮಧ್ಯೆ ಇರುವಷ್ಟು ದಿನ ಏನನ್ನಾದರೂ ಸಾಧಿಸಿಯೇ ತೀರುತ್ತೇನೆ ಎಂದು ಛಲ ಮತ್ತು ನಿಷ್ಕಲ್ಮಶವಾದ ಗುರಿಯನ್ನು ಹೊಂದಿರುವುದು ಅವಶ್ಯಕ, ವಿದ್ಯಾರ್ಥಿಗಳೇ ನೀವು ನಿಮ್ಮ ಜೀವನಲ್ಲಿ ಗುರಿ ಮತ್ತು ಸಾಧನೆಯ ಮಾರ್ಗವನ್ನು ಹೊಂದಿದ್ದರಷ್ಟೇ ಸಾಲದು, ಈ ಸ್ಪರ್ಧಾ ಯುಗದಲ್ಲಿ ಅದಕ್ಕೆ ಬೇಕಾದ ಸೂಕ್ತ ತಯಾರಿ ಮತ್ತು ಜೊತೆಗಾರನಿರಬೇಕು. ಆ ನಿಮ್ಮ ಜೊತೆಗಾರನೇ ಗಡಿಭಾಗದಲ್ಲಿ ಕನ್ನಡದ ಕಂಪನ್ನು ಸೂಸುತ್ತಿರುವ ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ನೆರಳಿನಲ್ಲಿರುವ ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆ.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪಟ್ಟಣಾಧಾರಿತ ಶಿಕ್ಷಣವನ್ನು ನೀಡುವ ದೂರದೃಷ್ಟಿಯಿಂದ ಸುಸಜ್ಜಿತ ಕಟ್ಟಡ, ವಿಶಾಲವಾದ ಆಟದ ಮೈದಾನ, ಅಂತರಜಾಲ ವ್ಯವಸ್ಥೆ ಹೊಂದಿರುವ ಗಣಕಯಂತ್ರದ ಕೊಠಡಿ, ಸ್ಮಾರ್ಟಬೋರ್ಡ ಆಧಾರಿತ ಭೋದನೆ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಅನೇಕ ಮೂಲಸೌಕರ್ಯಗಳನ್ನು ಸಂಸ್ಥೆಯು ಒದಗಿಸಿಕೊಟ್ಟಿದೆ. ವಿದ್ಯಾರ್ಥಿಗಳ ಜ್ಞಾನದ ಹಸಿವಿಗೆ ಮತ್ತು ಬಾಯಾರಿಕೆಗೆ ನೀರನ್ನು ಮತ್ತು ಆಹಾರವನ್ನು ನೀಡಿ, ಗುಣಾತ್ಮಕ ಶಿಕ್ಷಣ ಮತ್ತು ಮೌಲ್ಯಯುತ ಬದುಕನ್ನು ನಡೆಸಲು ಶಾಲೆಯ ಎಲ್ಲ ಗುರುವೃಂದ ಹಗಲಿರುಳು ಶ್ರಮಿಸುತ್ತಿರುವುದು ತುಂಬಾ ಸಂತನವೆಸುತ್ತದೆ.

"ಕಷ್ಟಗಳು ಬರುವುದು ನಿಮ್ಮನ್ನು ನಾಶ ಮಾಡಲು ಅಲ್ಲ, ನಿಮ್ಮೊಳಗಿನ ಶಕ್ತಿಯನ್ನು ಅರ್ಥ ಮಾಡಿಸಲು, ನೀವು ಮಣಿಯದ ವ್ಯಕ್ತಿತ್ವ ಎಂಬುದನ್ನು ಮನವರಿಕೆಮಾಡಿಸಲು:" ಎಂಬ ಡಾ|| ಅಬ್ದುಲ ಕಲಾಂ ಅವರ ಅರ್ಥಗರ್ಭಿತ ಮಾತುಗಳಿಂದ ನಿಮ್ಮನ್ನು ನೀವು ಇನ್ನಷ್ಟು ಸದೃಢಗೊಳಿಸಿಕೊಂಡು ಈ ಶೈಕ್ಷಣಿಕ ಹೋರಾಟದಲ್ಲಿ ಮುನ್ನುಗ್ಗಿ ಸಾಧನೆಯ ಶಿಖರದಲ್ಲಿ ವಿರಾಜಮಾನರಾಗಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸುತ್ತೆನೆ……