ಜೊಲ್ಲೆ ಶಿಕ್ಷಣ ಸಂಸ್ಥೆಯ

ಶಿವಶಂಕರ ಜೊಲ್ಲೆ ಕನ್ನಡ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಯಕ್ಸಂಬಾ

President Desk

  • Home
  • President Desk
Hon'ble Sou. Shashikala A. Jolle

ಸೌ.ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ

ಅಧ್ಯಕ್ಷರು ಹಾಗೂ Minister Muzarai, Haj and Wakf

ಆತ್ಮೀಯ ವಿದ್ಯಾರ್ಥಿಗಳೇ,

ಸಂಸ್ಕೃತದಲ್ಲೊಂದು ಸುಂದರ ಸುಭಾಷಿತವಿದೆ. “ಮಳೆ ಹಣಿಯ ಹಣೆಬರಹವು ಅದು ಬೀಳುವ ಸ್ಥಳದಿಂದ ನಿರ್ಧರಿಸಲ್ಪಡುತ್ತದೆ” ಈ ಸುಭಾಷಿತದಲ್ಲಿ ಮೂರು ಸ್ಥಳಗಳ ವಿವರಣೆಯಿದೆ. ಆ ಮಳೆ ಹನಿಯು ಕಾಯ್ದ ಕಬ್ಬಿಣದ ಮೇಲೆ ಉದುರಿದರೆ ಕ್ಷಣಾರ್ಧದಲ್ಲಿ ಆವಿಯಾಗಿ ಹೋಗುತ್ತದೆ. ತಾವರೆಯ ದಳಗಳ ಮೇಲೆ ಉರುಳಿದರೆ ಕೆಲವು ಗಂಟೆಗಳ ಕಾಲ ಫಳಫಳಿಸುತ್ತದೆ. ಅದೇ ರೀತಿಯಾಗಿ ಸಮುದ್ರದ ನೆತ್ತಿಯ ಮೇಲೆ ಬಾಯ್ತೆರೆದು ಕಾಯ್ದಿರುವ ಚಿಪ್ಪಿನಲ್ಲಿ ಬಿದ್ದರೆ ಅದು ಶಾಶ್ವತವಾಗಿ ಹೊಳೆವ ಸ್ವಾತಿ ಮುತ್ತಾಗುತ್ತದೆ.

ಈ ಸುಭಾಷಿತವು ವಿದ್ಯಾರ್ಥಿ ಜೀವನಕ್ಕೆ ತುಂಬಾ ಅನ್ವಯವಾಗುತ್ತದೆ. ನಮ್ಮ ಬದುಕಿನ ಸೌಧ ನಿಂತಿರುವುದು ನಂಬಿಕೆ ಎಂಬ ಬುನಾದಿಯ ಮೇಲೆ ನಮ್ಮ ನಂಬಿಕೆಗಳು ನಮ್ಮ ಸುತ್ತ-ಮುತ್ತಲಿನ ಪರಿಸರ, ಕುಟುಂಬ, ಸ್ನೇಹಿತರು, ಶಿಕ್ಷಕರು, ನಾವು ಓದುವ ಪುಸ್ತಕಗಳಿಂದ ರೂಪಗೊಳ್ಳುತ್ತದೆ. ಅದರಲ್ಲೂ ಸಾಧನೆಗೆ ಪೂರಕವಾಗುವ ‘ನಾನು ಗೆಲ್ಲಬಲ್ಲೆ, ನಾನು ಹೊಳೆಯುವ ಸ್ವಾತಿ ಮುತ್ತಾಗಬಲ್ಲೆ ‘ ಎಂಬ ನಂಬಿಕೆ ತುಂಬಾ ಮಹತ್ವದ್ದು. ಅದಕ್ಕೆ ನಿರಂತರವಾಗಿ ಪ್ರಯತ್ನಿಸಬೇಕು. ಸಾವಿರ ಸಲ ಸೋತರೂ ತನ್ನ ಪ್ರಯೋಗವನ್ನು ಮುಂದುವರೆಸಿ ಯಶಸ್ವಿಯಾದ ಥಾಮಸ್ ಅಲ್ವಾ ಎಡಿಸನ್, ಹತ್ತಾರು ಬಾರಿ ಸೋತರೂ ಕೊನೆಗೂ ಗೆದ್ದ ಅಬ್ರಾಹಂ ಲಿಂಕನರಂತಹ ಅನೇಕ ಸಾಧಕರು ನಮಗೆ ಮಾದರಿಯಾಗಿದ್ದಾರೆ. ನೀವೂ ಕೂಡ ಒಂದೆರಡು ಬಾರಿ ವಿಫಲತೆ ಹೊಂದ್ದಿದರು ದೃತಿಗೆಡದೆ ಮುಂದೆ ಸಾಗಿದರೆ ಸಾಧಕರಾಗಬಲ್ಲಿರಿ ಇದರಲ್ಲಿ ಸಂಶಯವೇ ಇಲ್ಲ.

ಓದುವ ವಯಸ್ಸಿನಲ್ಲಿ ತಮ್ಮ ಸಮಯವನ್ನೆಲ್ಲ ಶಿಕ್ಷಣದಲ್ಲಿ ತೊಡಗಿಸಿ ಕಠಿಣ ಪರಿಶ್ರಮ ಹಾಗೂ ದೀರ್ಘ ಪ್ರಯತ್ನದಿಂದ ಉನ್ನತ ಸ್ಥಾನದಿಂದಲೇ ನಿಮ್ಮ ಜೀವನ ಯಾತ್ರೆಯನ್ನು ಪ್ರಾರಂಭಿಸಿರಿ. ಅಗ ಮಳೆ ಹನಿ ನೇರವಾಗಿ ಚಿಪ್ಪಿನಲ್ಲಿ ಸೇರಿ ಮುತ್ತಾಗುವಂತೆ ತಾವೂ ಕೂಡಾ ಸ್ವಾತಿ ಮುತ್ತುಗಳಾಗಿ ಹೊರಹೊಮ್ಮಿರಿ ಎಂದು ಶುಭ ಹಾರೈಸುತ್ತೆನೆ.