ಶ್ರೀ ಅಣ್ಣಾಸಾಹೇಬ ಶಂಕರ ಜೊಲ್ಲೆ
ಸಂಸ್ಥಾಪಕರು ಹಾಗೂ Ex MP Chikodi
ಆತ್ಮೀಯ ವಿದ್ಯಾರ್ಥಿಗಳೇ,
ದಿನ ಬೆಳಗುವುದು ಸೂರ್ಯನಿಂದ
ಮನ ಬೆಳಗುವುದು ನೀತಿಯಿಂದ
ದೇಶ ಬೆಳಗುವುದು ಪ್ರೀತಿಯಿಂದ
ನಿಮ್ಮ ಕೀರ್ತಿ ಬೆಳಗುವುದು ನೀವು ಮಾಡಿದ ಸಾಧನೆಯಿಂದ
ನಿಮ್ಮ ಬದುಕಿನಲ್ಲಿ ಎಂದಿಗೂ ನೀವು ದುರ್ಬಲ ಮನಸ್ಸಿನವರು ಆಗದಿರಿ. ದುರ್ಬಲ ಮನಸ್ಸು ವ್ಯಕ್ತಿಯ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಯನ್ನು ತುಂಬುತ್ತದೆ. ಜಗತ್ತಿನಲ್ಲಿ ಅನೇಕ ಸಾಧಕರು ಮೂಲತಃ ಯಾರು ಶ್ರೀಮಂತರಲ್ಲ, ಸಿರಿವಂತಿಕೆಯ ಮನೆತನದಿಂದ ಬಂದವರೂ ಅಲ್ಲ ಆದರೆ ಇಂದು ಸಾಧಕರಾಗಿ ಹೊರಹೊಮ್ಮಿದ್ದಾರೆ. ಅದಕ್ಕೆ ಅವರಲ್ಲಿದ್ದ ಆತ್ಮವಿಶ್ವಾಸ ಸಾಧಿಸುತ್ತೇನೆ ಎಂಬ ಛಲ ಮತ್ತು ಕಠಿಣವಾದ ಪರಿಶ್ರಮ ಅವರನ್ನು ಸಾಧಕರನ್ನಾಗಿ ಮಾಡಿದೆ.
ನೀವು ದೊಡ್ಡ ಮಟ್ಟದ ಕನಸನ್ನು ಕಂಡು ಅದರ ಬಗ್ಗೆ ಚಿಂತನೆ ಮಾಡಿ, ಆಲೋಚಿಸಿ ಅದರ ಬೆನ್ನಟ್ಟಿ ಹೋಗಿ ಆಗ ನಿಮ್ಮ ಬಳಿ ಕೆಳಮಟ್ಟದ ಹಾಗೂ ಋಣಾತ್ಮಕ ವಿಚಾರಗಳು, ಚಿಂತನೆಗಳು ಎಂದಿಗೂ ಸುಳಿಯುವುದಿಲ್ಲ. "Fortune favours the brave" ಎಂಬ ವಾಕ್ಯದಂತೆ ಒಂದು ವೇಳೆ ನಿಮ್ಮ ಜೀವನದಲ್ಲಿ ಸೋಲು ಬಂದರೆ ಅದನ್ನು ಸ್ವೀಕರಿಸಿ, ಸೋಲನ್ನೇ ಸೋಲಿಸುವೆ ಎಂದು ಪ್ರಮಾಣ ಮಾಡಿ ಆಗ ನಿಮ್ಮ ಬಳಿ ಸೋಲು ಎಂದಿಗೂ ಸುಳಿಯುವುದಿಲ್ಲ. ನಿಮ್ಮ ಗುರಿ ಮಾತ್ರ ನಿಮ್ಮ ಕಣ್ಮುಂದೆ ಸುಳಿಯುತ್ತದೆ. ನಾಳೆಯ ಬದುಕು ಸುಂದರವಾಗಬೇಕಾದರೆ ಇವತ್ತು ನೀವು ಸಮಯವನ್ನು ಗೌರವಿಸಲೇಬೇಕು. ನೀವು ಸಮಯವನ್ನು ಗೌರವಿಸಿದರೆ ಮುಂದೊಂದು ದಿನ ನಿಮ್ಮನ್ನು ಗೌರವಿಸುವ ಸಮಯ ಖಂಡಿತ ಬಂದೆ ಬರುತ್ತದೆ.
ಯಶಸ್ಸು ಎಂಬುದು ಕಂಡ ಕಂಡಲ್ಲಿ
ಬೆಳೆಯುವ ಸಾಧಾರಣ ಹೂವಲ್ಲ
ಆತ್ವ ವಿಶ್ವಾಸವಿರುವ, ಸೃಜನಶೀಲ
ಮನಸ್ಸುಳ್ಳ, ಶಿಸ್ತುಬಧ್ಧತೆವುಳ್ಳ,
ಸಮಯಪ್ರಜ್ಞೆವುಳ್ಳ ಚುರುಕಿನ
ವ್ಯಕ್ತಿತ್ವವುಳ್ಳ ಪವಿತ್ರವಾದ
ಹೃದಯಗಳಲ್ಲಿ ಬೆಳೆಯುವ
ಮಂದಾರ ಪುಷ್ಪ
ಎಂಬ ವಾಕ್ಯದಂತೆ ಮುದ್ದು ವಿದ್ಯಾರ್ಥಿಗಳೇ, ಆತ್ಮವಿಸ್ವಾಸವೆಬ ಚಿಲುಮೆ ನಿಮ್ಮಲ್ಲಿ ಚುಮ್ಮಲಿ... ಪ್ರಯತ್ನ ಎಂಬ ಜಲಧಾರೆ ನಿಮ್ಮಲ್ಲಿ ಉಕ್ಕಿ ಹರಿಯಲಿ... ನಿಮ್ಮ ಕನಸು ನನಸಾಗಲಿ… ನಿಮ್ಮ ಭವಿಷ್ಯ ಶುಭವಾಗಲಿ ಎಂದು ಹಾರೈಸುತ್ತೇನೆ.